Friday, March 2, 2007

ಆವರಣೋಕ್ತಿಗಳು

ಕೃಪೆ : ಎಸ್. ಎಲ್. ಭೈರಪ್ಪ ಮತ್ತು ಸಾಹಿತ್ಯ ಭಂಡಾರ

 • ಸತ್ಯವನ್ನು ಮರೆಮಾಚುವ ಮಾಯೆಯ ಕಾರ್ಯಕ್ಕೆ ಆವರಣವೆಂದೂ ಅಸತ್ಯವನ್ನು ಬಿಂಬಿಸುವ ಕಾರ್ಯಕ್ಕೆ ವಿಕ್ಷೇಪವೆಂದೂ ಹೆಸರು.

 • ಇಂಗ್ಲಿಷಿನಲ್ಲಿ ಫಾಲಿಂಗ್ ಇನ್ ಲವ್ ಎಂಬ ಉಕ್ತಿ ಎಷ್ಟು ಅರ್ಥಪೂರ್ಣವಾದದ್ದು. ಫಾಲ್, ಬೀಳುವುದು. ಪ್ರೇಮದಲ್ಲಿ ಬೀಳುವಾಗ, ಬಿದ್ದಾಗ ಹಿಂದು ಮುಂದು, ಪೂರ್ವಾಪರದ ಆಲೋಚನೆ ಬರುವುದಿಲ್ಲ. ಹ್ಯಾಗೋ ಆಗತ್ತೆ ಎಂಬ ಪ್ರಜ್ಞಾಪೂರ್ವಕ ಅಸ್ಪಷ್ಟತೆಯೇ ಮುನ್ನಡೆಸುತ್ತೆ. ಈ ಅಸ್ಪಷ್ಟತೆ ಇಲ್ಲದಿದ್ದರೆ ಮುನ್ನಡೆ ಇಲ್ಲ.

 • ಈ ಆಲದ ಮರ ಒಂದು ಸಮರ್ಪಕ ಪ್ರತಿಮೆಯಾಗಿದೆ ಅಲ್ವಾ? ಮೂಲ ಮರ ಹರಡಿ ಸುತ್ತ ಬಿಳಲುಬಿಟ್ಟು, ಆ ಹಲವಾರು ಬಿಳಲುಗಳೇ ನೆಲದೊಳಕ್ಕೆ ಇಳಿದು ಬೇರುಗಳಾಗಿ ಅವುಗಳೆಲ್ಲ ಒಂದೊಂದೂ ಬೆಳೆದು ಹರಡಿ ಹತ್ತು ಹಲವು ಬಿಳಲುಗಳನ್ನು ಬಿಟ್ಟು ಇದೊಂದು ನೂರಾರು ಬೇರುಗಳ ವಿಶಾಲವೃಕ್ಷದಂತೆ ಕಾಣಿಸುತ್ತಲ್ಲವಾ? ಈ ವೃಕ್ಷದ ಮೂಲ ಬೇರು ಯಾವುದು ಹೇಳು ನೋಡೋಣ? ವಾಸ್ತವ ಅಂದರೆ ಮೂಲ ಬೇರು ಸತ್ತು ಹೋಗಿದೆ. ಯಾವ ಬೇರಾದರೂ ಎಷ್ಟು ದಿನ ಬದುಕಿರುಕ್ಕೆ ಸಾಧ್ಯ? ನೆಲಕ್ಕಿಳಿದ ಪ್ರತಿಯೊಂದು ಬಿಳಲೂ ತಾನೇ ಮೂಲ ಬೇರು ಅಂತ ಉದ್ಛೋಷಿಸಿಕೊತ್ತಿದೆ. ನಮ್ಮ ಧರ್ಮವೂ ಹೀಗೆಯೇ ಅಲ್ಲವಾ?
 • ಹಿಂದೂಗಳು ತುಂಬ ಸಂಕುಚಿತರು, ಅನ್ಯಧರ್ಮೀಯರನ್ನು ಕೀಳೆಂದು ಭಾವಿಸುವ ವಿಗ್ರಹಾರಕ ಜನಾಂಗದವರು ಎಂದು ನನ್ನ ಅಜ್ಜ ಅಜ್ಜಿಯರು ಹೇಳುತ್ತಿದ್ದುದು ಈಗ ನೆನಪಾಗುತ್ತಿದೆ
 • ಬ್ರಿಟೀಷರ ವಿರುದ್ಧ ಹೋರಾಡಿದವನೆಂಬ ಕಾರಣವನ್ನು ಮುಂದೆ ಮಾಡಿ ಟಿಪ್ಪುವನ್ನು ರಾಷ್ಟ್ರನಾಯಕನೆನ್ನಬಹುದಾದರೆ ಅದೇ ಬ್ರಿಟೀಷರ ವಿರುದ್ಧ ಹೋರಾಡಿದ ಮರಾಠರನ್ನೇಕೆ ಈ ಇತಿಹಾಸಕಾರರು-ಸಾಹಿತಿಗಳು ವ್ಯೆಭವೀಕರಿಸುವುದಿಲ್ಲ?
 • ಇರುವ ಊರುಗಳ ಹೆಸರು ಬದಲಿಸುವುದು ಒಬ್ಬ ಜೀವಂತ ವ್ಯಕ್ತಿಯನ್ನು ಧರ್ಮಾಂತರಿಸುವಷ್ಟೇ ಹೀನ ಕೃತ್ಯ

 • ೧೭೯೧ರಲ್ಲಿ ಮೂರನೆಯ ಮ್ಯೆಸೂರು ಯುದ್ಧವಾಗಿ ಸೋತು ಬ್ರಿಟೀಷರಿಗೆ ದೊಡ್ಡ ಮೊತ್ತದ ಸಂಪತ್ತನ್ನೂ ರಾಜ್ಯದ ಮುಖ್ಯ ಭಾಗಗಳನ್ನೂ ಒಪ್ಪಿಸಿ ಇಬ್ಬರೂ ಮಕ್ಕಳನ್ನೂ ಯುದ್ಧಬಂಧಿಯಾಗಿ ಕೊಟ್ಟ ಮೇಲೆ ಶೃಂಗೇರಿ ಮಠಕ್ಕೆ ಕಾಣಿಕೆ ಸಲ್ಲಿಸುವ ಮೂಲಕ ಹಿಂದೂಗಳ ಅಸಮಾಧಾನವನ್ನು ಕಡಿಮೆ ಮಾಡಲು ಪ್ರಯತ್ನಿಸಿದುದನ್ನು ಇವತ್ತಿನ ಎಳಸು ಹಿಂದೂಗಳು ಮತ್ತು ಜಾತ್ಯಾತೀತವಾದಿಗಳು ದೊಡ್ಡದು ಮಾಡಿ ಟಿಪ್ಪುವನ್ನೊಬ್ಬ ಧರ್ಮಸಹಿಷ್ಣುವೆಂದು ಬಿಂಬಿಸುತ್ತಾರೆ

 • ತಮಿಳುನಾಡಿನ ಮುಸ್ಲಿಮರು ತಮಿಳನ್ನು ಇಂದಿಗೂ ಮಾತನಾಡುತ್ತಾರೆ; ಆದರೆ ಮ್ಯೆಸೂರಿನ ಮುಸ್ಲಿಮರು ಇಂದಿಗೂ ಉರ್ದು ಮಾತನಾಡುವುದು ಕನ್ನಡದಲ್ಲಿ ಓದಿ ಬರೆಯದೆ ಇರುವುದು ಟಿಪ್ಪು ಆರಂಭಿಸಿದ ಫ಼ಾರ್ಸಿ ಮತ್ತು ಉರ್ದು ವಿದ್ಯಾಭ್ಯಾಸ ಪದ್ಢತಿಯಿಂದ

 • ಪ್ರಾಯಶ್ಚಿತ್ತದಲ್ಲಿ ಆ ತಪ್ಪನ್ನು ಮತ್ತೆ ಮಾಡುವುದಿಲ್ಲ ಅನ್ನುವ ನಿಶ್ಚಯವೂ ಸೇರಿರುತ್ತಲ್ಲವೆ?

 • ವಿಜಯನಗರದಲ್ಲಿ ಶೈವ ಮತ್ತು ವೈಷ್ಣವರು ಅನಾಗರಿಕ ಮಟ್ಟದಲ್ಲಿ ಹೊಡೆದಾಡಿ ರಕ್ತದ ಕಾಲುವೆ ಹರಿಸಿದುದನ್ನು ಇತ್ತೀಚಿನ ಸಂಶೋಧನೆಗಳು ಬೆಳಕಿಗೆ ತಂದಿವೆ. ಈಗ ನಾವು ನೋಡಿ ದುಃಖಿಸುವ ಭಗ್ನಗೊಂಡಿರುವ ವಿಗ್ರಹ ಮತ್ತು ಮಂದಿರಗಳೆಲ್ಲ ವಿಷ್ಣುವಿಗೆ ಸಂಬಂಧಿಸಿದವು. ಲಕ್ಷ್ಮಿನರಸಿಂಹಮೂರ್ತಿ ಮತ್ತು ವಿಜಯವಿಠ್ಠಲ ಮಂದಿರಗಳು ಇವಕ್ಕೆ ಎದ್ದು ಕಾಣುವ ಉದಾಹರಣೆಗಳು ಮಾತ್ರ. ಆದರೆ ಶೈವರ ವಿರೂಪಾಕ್ಷ ದೇವಾಲಯವು ಸ್ವಲ್ಪವೂ ಮುಕ್ಕಾಗದೆ ಇಂದಿಗೂ ರಾರಾಜಿಸುತ್ತಿದೆ ಯಾಕೆ? ನರಸಿಂಹ ಮತ್ತು ವಿಜಯವಿಠ್ಠಲಗಳನ್ನು ನಾಶಮಾಡಿದವರು ಅಲ್ಲಿಯ ಶೈವರು. ತಿರುಪತಿಯ ಅಂದರೆ ವೈಷ್ಣವರ ಅಂದರೆ ಆಂಧ್ರರ ದಬ್ಬಾಳಿಕೆಯನ್ನು ಸಹಿಸಲಾಗದೆ ಸ್ಥಳೀಯ ಶೈವರೇ ಮುಸಲ್ಮಾನ ದೊರೆಗಳನ್ನು ಆಹ್ವಾನಿಸಿ ಅವರಿಗೆ ವಿಜಯನಗರದ ಆಯಕಟ್ಟಿನ ಸ್ಥಳಗಳನ್ನು ತೋರಿಸಿದರು. ಇಲ್ಲಿಯ ಸಂಪತ್ತಿನ ಆಶೆಯಿಂದ ಮುಸಲ್ಮಾನ ದೊರೆಗಳು ದಂಡೆತ್ತಿ ಬಂದರು. ಇದೇ ಸಮಯವನ್ನು ಬಳಸಿಕೊಂಡು ಶೈವರು ವೈಷ್ಣವ ವಿಗ್ರಹ ಮತ್ತು ಮಂದಿರಗಳನ್ನು ನಾಶ ಮಾಡಿದರು. ಇಂದಿನ ಕಲವು ಮತಾಂಧರು ಇತಿಹಾಸಕಾರರ ಸೋಗಿನಲ್ಲಿ ಈ ಕೃತ್ಯವನ್ನು ಮುಸಲ್ಮಾನರ ತಲೆಗೆ ಕಟ್ಟಿ ದೇಶದ್ರೋಹವೆಸಗುತ್ತಿದ್ದಾರೆ.
 • ಈ ಪ್ರಪಂಚದಲ್ಲಿ ಎಲ್ಲಾ ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಅವನ್ನು ಕೊಂದು ತಿನ್ನುವ ಅಧಿಕಾರ ಮನುಷ್ಯನಿಗಿಲ್ಲ. ದೇವರು ಇತರ ಪ್ರಾಣಿಗಳನ್ನು ಸೃಷ್ಟಿಸಿರೋದು ಮನುಷ್ಯನ ಭೋಗಕ್ಕಾಗಿ ಅಲ್ಲ ಅನ್ನೋದು ಈ ದೇಶದ ಧರ್ಮಗಳ ತತ್ತ್ವಧರ್ಮಕೆಲಸ ಜಾರಿ ಮಾಡುವಾಗ ಒಂದಲ್ಲ ಹತ್ತು ಲಕ್ಷ ಜನ ತಡೆಯೊಡ್ಡಿದರೂ ಅವರನ್ನೆಲ್ಲಾ ಕೊಲ್ಲುವುದೇ ಧರ್ಮ

  ಧರ್ಮಕೆಲಸ ಜಾರಿ ಮಾಡುವಾಗ ಒಂದಲ್ಲ ಹತ್ತು ಲಕ್ಷ ಜನ ತಡೆಯೊಡ್ಡಿದರೂ ಅವರನ್ನೆಲ್ಲಾ ಕೊಲ್ಲುವುದೇ ಧರ್ಮ

  ಒಬ್ಬ ವ್ಯಕ್ತಿ ಸಾಯುವ ತನಕ ದೈವ ವಿರೋಧಿಯಾಗಿರಬಹುದು. ಸತ್ತ ಮೇಲೆ ಅವನಿಗೂ ಸದ್ಗತಿ ಕೊಡುವುದು ದೇವರ ಗುಣ. ದೇವರು ಯಾರನ್ನೂ ದ್ವೇಷಿಸುವುದಿಲ್ಲ. ಅಲ್ಲವೇ?

  ದೇವರಿಗಾದರೂ ಛಲ ಬೇಡವೇ? ದೇವರಿಗೇ ಛಲವಿಲ್ಲದಿದ್ದರೆ ಆ ಧರ್ಮದ ಅನುಯಾಯಿಗಳಿಗೆ ಎಲ್ಲಿಂದ ಬರಬೇಕು? ಅದಕ್ಕೇ ಈ ಜನಗಳು ಹೇಡಿಗಳಾಗಿದ್ದಾರೆಯೇ?

  ನೆನಪಿನಲ್ಲಿ ಉಳಿಯಲಾರದಷ್ಟು ದೇವಾಲಯಗಳನ್ನು ನೋಡಿದರೆ ಇತಿಹಾಸ ತಿಳಿದಂತಾಗುತ್ತದೆಯೆ?

  ಹಿಂದೂಗಳಲ್ಲಿ ನೂರೆಂಟು ದೇವರುಗಳು. ಇನ್ನು ಅವರಲ್ಲಿ ಒಗ್ಗಟ್ಟು ಎಲ್ಲಿಂದ ಬರಬೇಕು?

  ನಾವು ನೀತಿಯ, ಆಧ್ಯಾತ್ಮದ ಯಾವ ಮಟ್ಟದಲ್ಲಿರುತ್ತೇವೆಯೋ ಅದಕ್ಕೆ ಅನುಗುಣವಾದ ದೇವರನ್ನು ಸೃಷ್ಟಿಸುತ್ತೇವೆ

 • ಯಾವುದೋ ಅನಾಗರೀಕ ಕಾಲದಲ್ಲಿ ಅನಾಗರೀಕ ದೇಶದಲ್ಲಿ ಮಾಡಿದ ಕೃತ್ಯ, ಬೋಧಿಸಿದ ನಂಬಿಕೆಗಳನ್ನು ಇವತ್ತೂ ನಂಬಿ ಅನುಸರಿಸುವ ಮನೋಭಾವ ಇರುವ ತನಕ ಭಾವೈಕ್ಯ ಹೇಗೆ ಸಾಧ್ಯ?

  ಐತಿಹಾಸಿಕ ವ್ಯಕ್ತಿಗಳನ್ನು ಪುನರ್ವಿನ್ಯಾಸಗೊಳಿಸುವ ಕೆಲಸವನ್ನು ರಾಜಕಾರಣಿಗಳು ಮಾಡಿಸುತ್ತಿದ್ದಾರೆ. ರಾಜಕೀಯ ಸಿದ್ಧಾಂತಗಳಂತೂ ಇವರ ಬೆನ್ನೆಲುಬಾಗಿವೆ. ಇತಿಹಾಸದ ಜವಾಬ್ದಾರಿ ಇಲ್ಲದ ಸಾಹಿತಿಗಳು ಅವಕ್ಕೆ ತಕ್ಕಂತೆ ಕಥೆ ಕಾದಂಬರಿ ನಾಟಕಗಳನ್ನು ಬರೆಯುತ್ತಲೇ ಇದ್ದಾರೆ

  ಐತಿಹಾಸಿಕ ಸತ್ಯವನ್ನರಸುವವರು ಯಾರ ಬಗೆಗೂ ಅಗೌರವ ತೋರಿಸಬಾರದು

  ಭವಿಷ್ಯದ ಬಗ್ಗೆ ಆಕಾಂಕ್ಷೆ ಇದ್ದವರಿಗೆ ಜ್ಯೋತಿಷಿಗಳ ನೆರವು ಬೇಕು
I just completed reading this wonderful novel by S L Bhyrappa. Whatever has been put above are just excerpts from the novel and they are quoted at random as is told in the novel. Just by these I think anyone can feel what the novel would be about. It deals about our present view on our history, how it is being manipulated and mis-interpreted in our present day text books. Also many other issues like quasi-secularism, religion and vote bank based politics, Hindu-Muslim relationship, traditions of Hindus and Muslims, inter religion marriages, gender inequality, and so on and so forth. So its a well blended novel which treats all these with great deal of detail and sensitivity. Because of its hard hitting comments and statements about the weaker sections of Indian society, this novel has been of much discussion amongst the intellectuals. Welcome note is that it is already in its third edition just within a month of its first edition. Many blogs and newspapers have already carried views on this "would-be" controversial novel. Somewhere a parallel is drawn with Dan Brown's 'The Da-Vinci Code' because of its religious disclosures and overtones. I highly recommend this novel for all Kannada novel lovers and also for people who feel that they did not study the real history.

Will soon write more on this... Comments are welcome!

3 comments:

naveen said...

Avarana !

Ondu ondu putadallu namage satyada darshana madisuthade. Kelaondu vishayagalu, aschariya vagisuthave., naanu shaaleyalli odiddu ega avarana dalli Byrappanavaru tarka baddavagi heliruva vishayagalu, Habba yestondu tappu kalpane galu.

naanu samaaja shastra dalli kalithaddu yestara mattige sari yendu nange ega anumaana vaguthide.

Avarana ! odale bekada pusthaka.

~Naveen LN

Rajesh Hegde said...

The next novel I read will be this one. AvaraNokti tumba chennagide.

kannada said...

Hi,

Nimma ee lekhana odida mele naanu aa kadambari yannu odabeku annisuttide.

Haage nimmalli matondu vinanthi...

Ee kelagina antharjaalavannu veekshisi....

http://kannadahanigalu.co.nr/

Sadyavaadalli nimma ee blog nalli sanna jaagadalli prakatisidare, tumba upayukta vaaguttade

Dhanyavaadalu....

Regards
Kannada Hanigala Balaga
http://kannadahanigalu.co.nr/